Wednesday, February 2, 2011

ayodya tirpina satyamshgalu






ಅರವತ್ತು ವರ್ಷಗಳಿಂದ ನ್ಯಾಯಾಲಯದ ಒಳಗೆ ಮತ್ತು ಹೊರಗೆ ಹಿಂದೂ ಮುಸ್ಲಿಂ ಸಂಘರ್ಷಕ್ಕೆ ಕಾರಣವಾಗಿದ್ದ ಅಯೋಧ್ಯೆಯ ಭೂಹಕ್ಕಿನ ಪ್ರಕರಣದಲ್ಲಿ ಸೆಪ್ಟೆಂಬರ್ 30ರಂದು ಅಲಹಾಬಾದ್ ಹೈಕೋರ್ಟ್ [^] ನಿಂದ ಐತಿಹಾಸಿಕ ತೀರ್ಪು ಹೊರಬಂದಿದೆ. ಹಿಂದೂ ಮಹಾಸಭಾ, ಸುನ್ನಿ ವಕ್ಫ್ ಮಂಡಳಿ ಮತ್ತು ನಿರ್ಮೋಹಿ ಅಖಾಡಗಳಿಗೆ ವಿವಾದಿತ ಭೂಮಿಯನ್ನು ಮೂರು ಭಾಗಗಳಾಗಿ ಹಂಚಿ ನ್ಯಾಯಾಲಯ ಸಂಘರ್ಷಕ್ಕೆ ಒಂದು ತಾತ್ಕಾಲಿಕ ತಡೆ ತಂದಿದೆ.

ಈಗಿರುವ ರಾಮಲಲ್ಲಾ ಸ್ಥಳದಲ್ಲೇ ರಾಮ ಜನ್ಮಿಸಿದ್ದು, ರಾಮ ಮಂದಿರ ಕಟ್ಟಲು ಅಡ್ಡಿಯಿಲ್ಲ ಎಂದು ನ್ಯಾಯಾಲಯ ಹೇಳಿ ಹಿಂದೂಗಳಲ್ಲಿ ಹರ್ಷ ತಂದಿದ್ದರೆ, ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿರುವ ವಕ್ಫ್ ಸಮಿತಿ ಸುಪ್ರೀಂ ಕೋರ್ಟಿನ ಮೆಟ್ಟಿಲೇರುವುದಾಗಿ ಹೇಳಿದೆ. ಮುಂದೇನಾಗುತ್ತೋ ಏನೋ, ಆದರೆ ಸದ್ಯಕ್ಕಂತೂ ಕೋಮು ಗಲಭೆಯ ಹೆದರಿಕೆಯಲ್ಲಿ ಥರಗುಟ್ಟುತ್ತಿದ್ದ ಇಡೀ ದೇಶ ನಿರಾತಂಕದ ನಿಟ್ಟುಸಿರು ಬಿಟ್ಟಿದೆ. ಇದಕ್ಕೆ ಕಾರಣರಾದವರು ಅಲಹಾಬಾದ್ ಹೈಕೋರ್ಟಿನ ವಿಭಾಗೀಯ ಪೀಠದ ಸದಸ್ಯರಾದ ನ್ಯಾಯಮೂರ್ತಿ ಸಿಬಘತ್ ಉಲ್ಲಾ ಖಾನ್, ನ್ಯಾ. ಧರಂ ವೀರ್ ಶರ್ಮಾ ಮತ್ತು ನ್ಯಾ. ಸುಧೀರ್ ಅಗರವಾಲ್. ಇವರಲ್ಲಿ ನ್ಯಾ. ಶರ್ಮಾ ಇಂದು ನಿವೃತ್ತರಾಗುತ್ತಿದ್ದಾರೆ.

ವಿವಾದಿತ ಭೂಮಿಯಲ್ಲಿ ರಾಮ ಜನಿಸಿದ್ದನಾ, ಮಂದಿರದ ಮೇಲೆ ಮಸೀದಿ [^] ಕಟ್ಟಿದ್ದರಾ, ವಿವಾದಿತ ಕಟ್ಟಡ ಮಸೀದಿಯಾ, ಭೂಮಿ ಹಿಂದೂಗಳಿಗೆ ಸೇರಬೇಕಾ, ಮುಸ್ಲಿಂರಿಗೆ ಸೇರಬೇಕಾ ಎಂಬಿತ್ಯಾದಿ ಪ್ರಶ್ನೆಗಳನ್ನು ಈ ಪ್ರಕರಣ ಹುಟ್ಟುಹಾಕಿತ್ತು. ಇವೆಲ್ಲ ಪ್ರಶ್ನೆಗಳಿಗೆ ನ್ಯಾಯಮೂರ್ತಿಗಳು ಏನು ಹೇಳಿದ್ದಾರೆ, ಯಾವ್ಯಾವ ಸತ್ಯಾಂಶಗಳನ್ನು ಕಂಡುಕೊಂಡಿದ್ದಾರೆ, ಯಾವ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದಿವೆಯಾ ಎಂಬ ವಿವರಗಳು ಮೂವರೂ ನ್ಯಾಯಮೂರ್ತಿಗಳು ನೀಡಿರುವ ತೀರ್ಪಿನ ವಿವರಗಳಲ್ಲಿವೆ. ಆಸಕ್ತರು ಈ ವಿವರಗಳನ್ನು ಓದಬಹುದು. ಅವು ಕೆಳಗಿನಂತಿವೆ.

* ನ್ಯಾಯಮೂರ್ತಿ ಧರಂ ವೀರ್ ಶರ್ಮಾ ಅವರು ನೀಡಿದ ತೀರ್ಪಿನ ವಿವರ
* ನ್ಯಾಯಮೂರ್ತಿ ಸಿಬಘತ್ ಉಲ್ಲಾ ಖಾನ್ ಅವರು ನೀಡಿದ ತೀರ್ಪಿನ ವಿವರ
* ನ್ಯಾಯಮೂರ್ತಿ ಸುಧೀರ್ ಅಗರವಾಲ್ ಅವರು ನೀಡಿದ ತೀರ್ಪಿನ ವಿವರ

No comments:

Post a Comment